17
Image Credit : Asianet News
ಪುರುಷರ ಆರೋಗ್ಯ
ಇತ್ತೀಚಿನ ದಿನಗಳಲ್ಲಿ ಯುವ ಸಮುದಾಯ ಮಕ್ಕಳುನ ಮಾಡಿಕೊಳ್ಳುವುದರ ಬಗ್ಗೆ ತುಂಬಾನೇ ಯೋಚಿಸುತ್ತಾರೆ. ಮದುವೆಯಾದ ಮೂರ್ನಾಲ್ಕು ವರ್ಷ ಸಂಸಾರ ವಿಸ್ತರಣೆಗೆ ಮುಂದಾಗಲ್ಲ. ನಂತರ ಮಗು ಪಡೆದುಕೊಳ್ಳಲು ಮುಂದಾಗ ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇಂದಿನ ಆಧುನಿಕ ಜೀವನಶೈಲಿಯಿಂದ ಪುರುಷರಲ್ಲಿಯೂ ಬಂಜೆತನದ ಸಮಸ್ಯೆಗಳು ಕಂಡು ಬರುತ್ತಿವೆ.
27
Image Credit : Getty
ಪುರುಷರು ಮತ್ತು ಆಹಾರ
ಮದುವೆ ನಂತರ ಪುರುಷರಲ್ಲಿ ಅನೇಕ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಈ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಕೆಲವು ಆಹಾರಗಳಿಂದ ಪುರುಷರು ಅಂತರ ಕಾಯ್ದುಕೊಳ್ಳಬೇಕಾಗುತ್ತದೆ. ಆರೋಗ್ಯ ತಜ್ಞರ ಪ್ರಕಾರ, ಪುರುಷರು ಕಡ್ಡಾಯವಾಗಿ ಕೆಲವೊಂದು ಆಹಾರವನ್ನು ಕಡ್ಡಾಯವಾಗಿ ತಪ್ಪಿಸಬೇಕು. ಆ ಆಹಾರ ಯಾವುದು ಎಂಬುದರ ಮಾಹಿತಿ ಇಲ್ಲಿದೆ ನೋಡಿ.
37
Image Credit : AI generated
ಟ್ರಾನ್ಸ್ ಫ್ಯಾಟ್ಸ್
ಆರೋಗ್ಯ ತಜ್ಞರ ಪ್ರಕಾರ, ಪುರುಷರು ಟ್ರಾನ್ಸ್ ಫ್ಯಾಟ್ ಇರುವ ಆಹಾರ ತಪ್ಪಿಸಬೇಕು. ಈ ಆಹಾರವನ್ನು ಅನಾರೋಗ್ಯಕರವೆಂದು ಪರಿಗಣಿಸಲಾಗುತ್ತದೆ. ಟ್ರಾನ್ಸ್ ಫ್ಯಾಟ್ ಆಹಾರ ಪುರುಷರಲ್ಲಿ ಆಹಾರದ ವೀರ್ಯದ ಗುಣಮಟ್ಟ ಕಡಿಮೆ ಮಾಡುತ್ತದೆ. ಸ್ಪ್ಯಾನಿಷ್ ಅಧ್ಯಯನದ ಪ್ರಕಾರ, ಈ ಟ್ರಾನ್ಸ್ ಫ್ಯಾಟ್ ಇರುವ ಆಹಾರ ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ.
47
Image Credit : Asianet News
ಸಂಸ್ಕರಿಸಿದ ಮಾಂಸ
ಸಂಸ್ಕರಿಸಿದ ಯಾವುದೇ ಮಾದರಿಯ ಮಾಂಸದ ಸೇವನೆ ಪುರುಷರಲ್ಲಿ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ಸಂಸ್ಕರಿಸಿದ ಮಾಂಸದಿಂದ ಮಾಡಿದ ಅಡುಗೆಯ ಸೇವನೆ ಮಾಡಬಾರದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
57
Image Credit : Getty
ಸೋಯಾ ಆಹಾರ
67
Image Credit : Pinterest
ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು
ಹೆಚ್ಚಿನ ಕೊಬ್ಬಿನ ಡೈರಿ ಉತ್ಪನ್ನಗಳು ಪುರುಷರ ವೀರ್ಯಾಣುಗಳ ಸಂಖ್ಯೆಯನ್ನು ಕಡಿಮೆ ಮಾಡುತ್ತದೆ ಎಂದು ಕೆಲವು ವರದಿಗಳಲ್ಲಿ ತಿಳಿದು ಬಂದಿದೆ. ಈ ಕುರಿತು ನಡೆಸಿದ ಅಧ್ಯಯನದಲ್ಲಿ, ಪೂರ್ಣ ಕೊಬ್ಬಿನ ಹಾಲು, ಕ್ರೀಮ್ ಮತ್ತು ಚೀಸ್ ಸೇವನೆಯಿಂದ ವೀರ್ಯದ ಗುಣಮಟ್ಟ ಕ್ಷೀಣಿಸುವ ಸಾಧ್ಯತೆಗಳಿರುತ್ತವೆ.
77
Image Credit : Getty
‘ಅತಿಯಾದರೆ ಅಮೃತವೂ ವಿಷ’
‘ಅತಿಯಾದರೆ ಅಮೃತವೂ ವಿಷ’ ಎಂಬ ಗಾದೆಯಂತೆ ಆರೋಗ್ಯಕರ ಆಹಾರಗಳನ್ನು ಮಿತವಾಗಿ ಸೇವಿಸುವುದು ಮುಖ್ಯ. ಆರೋಗ್ಯಕರ ಜೀವನ ನಡೆಸಲು ಸರಿಯಾದ ಆಹಾರ ಪದಾರ್ಥಗಳನ್ನು ಆಯ್ಕೆ ಮಾಡುವುದು ಬಹಳ ಅವಶ್ಯಕ.
ಇದನ್ನೂ ಓದಿ: ಪುರುಷರಲ್ಲಿ ಕಂಡುಬರುವ 4 ಲಕ್ಷಣಗಳು ಆರೋಗ್ಯಕ್ಕೆ ತುಂಬಾನೇ ಅಪಾಯಕಾರಿ
Disclaimer: ಇದು ಅಂತರ್ಜಾಲದಲ್ಲಿ ಲಭ್ಯವಿರುವ ಮಾಹಿತಿಯನ್ನು ಆಧರಿಸಿದೆ. ಇದನ್ನು ಏಷ್ಯಾನೆಟ್ ಸುವರ್ಣ ನ್ಯೂಸ್ ದೃಢೀಕರಿಸುವದಿಲ್ಲ. ಬಳಕೆದಾರರು ಇವನ್ನು ಕೇವಲ ಮಾಹಿತಿಯನ್ನಾಗಿ ಮಾತ್ರ ಪರಿಗಣಿಸಬೇಕಾಗಿ ವಿನಂತಿ.